ಗುರಿ ಮತ್ತು ಉದ್ದೇಶಗಳು

ಭಾರತ ಜ್ಞಾನ ವಿಜ್ಞಾನ ಕರ್ನಾಟಕ ಸಮಿತಿಗೆ ಒಂದಿಷ್ಟು ಕನಸುಗಳಿವೆ. ಏನೆಂದರೆ ಕರ್ನಾಟಕವು ಸುಂದರ ಸಾಕ್ಷರ ನಾಡಾಗಬೇಕು. ಈ ನಾಡಿನ ಎಲ್ಲ ಮಕ್ಕಳೂ ಶಿಕ್ಷಣವನ್ನೂ ಹೊಂದಲೇಬೇಕು. ಮಹಿಳಾ ಸಮಾನತೆ, ಮಹಿಳಾ ಸಬಲೀಕರಣ ನಮ್ಮ ಆಶಯಗಳು. ಈ ಕನಸು ನನಸಾಗುವಂತೆ ಕಾರ್ಯ ಮಾಡುವುದು, ಅದಕ್ಕಾಗಿ
     ಅ) ಜನ ಸಮೂಹದಲ್ಲಿ ಸಾಕ್ಷರತೆ ಹರಡುವುದು.
      ಆ) ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕರಣಕ್ಕಾಗಿ ದುಡಿಯುವುದು
    ಇ) ಮಹಿಳಾ ಸಮಾನತೆ, ಮಹಿಳಾ ಸಬಲೀಕರಣ ಸಾಧಿಸುವುದು
    ಈ) ಅಲ್ಮಾ-ಆಟಾ ಘೋಷಣೆಯಂತೆ ಎಲ್ಲರಿಗೂ ಆರೋಗ್ಯದ ಗುರಿ ಸಾಧಿಸುವುದು, ಪ್ರಾಥಮಿಕ ಆರೋಗ್ಯ ಪಾಲನೆಗಾಗಿ, ಸಮಗ್ರ ಆರೋಗ್ಯ ವ್ಯವಸ್ಥೆಗಾಗಿ ಆಗ್ರಹಿಸುವುದು.

Mathematics Workshop

Application Form for Hassan District Workshop on ISON

Please Click here to download the Application Form for Hassan District Workshop On ISON.

To Apply Online Click Here

 

Please Click here to download the Application Form for Hassan District Workshop On ISON English Version PDF.

National Workshop On “Eyes on ISON”

Eyes On ISON

 

Eyes On ISON

 

Western Ghats - Talk by Dr. VS Vijayan

ನಮ್ಮ ಪ್ರಕಟಣೆಗಳು

ನಮ್ಮ ಪ್ರಕಟಣೆಗಳು: ಭಾರತ ಜ್ಞಾನ ವಿಜ್ಞಾನ ಸಮಿತಿ ಕರ್ನಾಟಕ ಇಲ್ಲಿಯವರೆಗೆ ಒಟ್ಟು 75 ಶೀರ್ಷಿಕೆಗಳಲ್ಲಿ ಪುಸ್ತಕಗಳನ್ನು ಪ್ರಕಟಿಸಿದೆ. ಪ್ರಕಟವಾದ ಪುಸ್ತಕಗಳಲ್ಲಿ ಎರಡು ವಿಧಗಳು:
    1. ಮಕ್ಕಳಿಗಾಗಿ ಚಿಕ್ಕ ಪುಸ್ತಕಗಳು ಸಾಮಾನ್ಯವಾಗಿ ಮಕ್ಕಳ ದಿನಾಚಣೆ - ನವ್ಹೆಂಬರ್ 14 ಹೊರತರಲಾಗುವುದು
    2. ಸಾಮಾನ್ಯ ಓದುಗರಿಗಾಗಿ ಪುಸ್ತಕಗಳು

ಸಂಘಟನೆಯು ಮುಂದಿನ ವರ್ಷಗಳಲ್ಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿರುವ ಕಾರ್ಯಕ್ರಮಗಳು ಮತ್ತು ಯೋಜನೆಗಳು

ಸಂಘಟನೆಯು ಮುಂದಿನ ವರ್ಷಗಳಲ್ಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿರುವ ಕಾರ್ಯಕ್ರಮಗಳು ಮತ್ತು ಯೋಜನೆಗಳು:
    ಅಂತಾರಾಷ್ಟ್ರೀಯ ರಸಾಯನಶಾಸ್ತ್ರ ವರ್ಷ
    ಮೂಲ ವಿಜ್ಞಾನ ಕಲಿಕೆ ಹಾಗೂ ಬೋಧನೆಗಾಗಿ ಪ್ರಯತ್ನಗಳು
    ವಿಜ್ಞಾನ ಪ್ರಸಾರ್ ಸಹಯೋಗದಲ್ಲಿ ವಿಜ್ಞಾನ ಸಂವಹನ ಪುಸ್ತಕ ಪ್ರಕಟಣೆ
    ಶಿಕ್ಷಣದಲ್ಲಿ ಕಲೆ ವಿಸ್ತರಣೆ
    ಕಲಿಕಾ ಉನ್ನತೀಕರಣ ಯೋಜನೆ ವಿಸ್ತರಣೆ

ಅಧ್ಯಯನಗಳು

ಸಮಿತಿಯು ಇದುವರೆಗೆ ನಡೆಸಿರುವ ಪ್ರಮುಖ ಮೌಲ್ಯಮಾಪನ ಹಾಗೂ ಅಧ್ಯಯನಗಳು

ಚಟುವಟಿಕೆಗಳು

ಗುರಿ ಮತ್ತು ಉದ್ದೇಶ ಸಾಧನೆಗಾಗಿ ಸಂಸ್ಥೆಯು ಸ್ಥಾಪನೆಗೊಂಡಾಗಿನಿಂದಲೂ ಇಲ್ಲಿಯವರೆಗೆ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ.
    1) ಅನಕ್ಷರತೆಯ ವಿರುದ್ಧ ಜನಜಾಗೃತಿಗಾಗಿ ರಾಜ್ಯಾದ್ಯಂತ ಕಲಾಜಾಥ ಏರ್ಪಡಿಸಿದೆ.
    2) ಪ್ರಾಥಮಿಕ ಶಿಕ್ಷಣದ ಸಾರ್ವತ್ರಿಕರಣಕ್ಕಾಗಿ ಶಿಕ್ಷಣದ ಬೋಧನಾ ಮಟ್ಟವನ್ನು ಹೆಚ್ಚಿಸಲು ಮತ್ತು ಕಲಿಕೆಯಲ್ಲಿ ಮಕ್ಕಳಿಗೆ ಆಸಕ್ತಿ ಹುಟ್ಟಿಸಲು ಬಾಲೋತ್ಸವ, ಚಿಣ್ಣರ ಮೇಳಗಳನ್ನು ಏರ್ಪಡಿಸಲಾಗಿದೆ.
    3) ಸಾಮಾನ್ಯ ಜನರ ಮೌಢ್ಯ ಅಳಿಯಲು 'ಪವಾಡ ರಹಸ್ಯ ಬಯಲು' ಕಾರ್ಯಕ್ರಮಗಳನ್ನು ನೀಡಲಾಗಿದೆ. ವೈಜ್ಞಾನಿಕ ಚಿಂತನೆಗೆ ಜನರನ್ನು ಪ್ರಚೋದಿಸಿದೆ. ಈ ಕಾರ್ಯಕ್ರಮ ಈಗಲೂ ನಡೆಯುತ್ತದೆ.

ಬಿಜಿವಿಎಸ್ ಹಿನ್ನೆಲೆ

ಭಾರತ ಜ್ಞಾನ ವಿಜ್ಞಾನ ಸಮಿತಿ ಕರ್ನಾಟಕದಲ್ಲಿ ವಿಜ್ಞಾನವನ್ನು ಜನಪ್ರಿಯಗೊಳಿಸಲು ಹುಟ್ಟಿಕೊಂಡ ಒಂದು ಸಂಸ್ಥೆ. ಆಂದೋಲನದ ಮೂಲಕ ಇದು ಸಾಧ್ಯ ಎಂಬುದು ಸಂಸ್ಥೆಯ ಬಲವಾದ ನಂಬಿಕೆ. ಅದಕ್ಕಾಗಿ ಈ ನಾಡಿನಲ್ಲಿ ಜನ ವಿಜ್ಞಾನ ಚಳುವಳಿಗಳ ಕರ್ಣಧಾರತ್ವವನ್ನು ವಹಿಸಿಕೊಂಡಿದೆ. ವಿಜ್ಞಾನದ ಅರಿವಿನಿಂದ ಜನರು ತಮ್ಮ ಸಮಸ್ಯೆಗಳನ್ನು ಸರಿಯಾಗಿ ತಿಳಿಯಲು ಸಾಧ್ಯವಾಗುತ್ತದೆ ಮತ್ತು ಅವುಗಳಿಗೆ ಪರಿಹಾರ ಕಂಡುಕೊಳ್ಳುವ ವಿಧಾನವು ಗೊತ್ತಾಗುತ್ತದೆ. ವಿಜ್ಞಾನ ಸಮಾಜ ಪರಿವರ್ತನೆಯಲ್ಲಿ ಒಂದು ಸಾಧನವಾಗಿ ಕಾರ್ಯನಿರ್ವಹಿಸುತ್ತದೆ. 1991ರಲ್ಲಿ ಅಸ್ತಿತ್ವಕ್ಕೆ ಬಂದ ಈ ಸಂಸ್ಥೆ ರಾಜ್ಯದ 27 ಜಿಲ್ಲೆಗಳಲ್ಲಿ ತನ್ನ ಜಾಲ ಹರಡಿಕೊಂಡಿದೆ. ಸದ್ಯ ಇದರ ಸದಸ್ಯರ ಸಂಖ್ಯೆ 5000.

Subscribe to ಭಾರತ ಜ್ಞಾನ ವಿಜ್ಞಾನ ಸಮಿತಿ, ಕರ್ನಾಟಕ RSS