ಗುರಿ ಮತ್ತು ಉದ್ದೇಶಗಳು

ಭಾರತ ಜ್ಞಾನ ವಿಜ್ಞಾನ ಕರ್ನಾಟಕ ಸಮಿತಿಗೆ ಒಂದಿಷ್ಟು ಕನಸುಗಳಿವೆ. ಏನೆಂದರೆ ಕರ್ನಾಟಕವು ಸುಂದರ ಸಾಕ್ಷರ ನಾಡಾಗಬೇಕು. ಈ ನಾಡಿನ ಎಲ್ಲ ಮಕ್ಕಳೂ ಶಿಕ್ಷಣವನ್ನೂ ಹೊಂದಲೇಬೇಕು. ಮಹಿಳಾ ಸಮಾನತೆ, ಮಹಿಳಾ ಸಬಲೀಕರಣ ನಮ್ಮ ಆಶಯಗಳು. ಈ ಕನಸು ನನಸಾಗುವಂತೆ ಕಾರ್ಯ ಮಾಡುವುದು, ಅದಕ್ಕಾಗಿ
     ಅ) ಜನ ಸಮೂಹದಲ್ಲಿ ಸಾಕ್ಷರತೆ ಹರಡುವುದು.
      ಆ) ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕರಣಕ್ಕಾಗಿ ದುಡಿಯುವುದು
    ಇ) ಮಹಿಳಾ ಸಮಾನತೆ, ಮಹಿಳಾ ಸಬಲೀಕರಣ ಸಾಧಿಸುವುದು
    ಈ) ಅಲ್ಮಾ-ಆಟಾ ಘೋಷಣೆಯಂತೆ ಎಲ್ಲರಿಗೂ ಆರೋಗ್ಯದ ಗುರಿ ಸಾಧಿಸುವುದು, ಪ್ರಾಥಮಿಕ ಆರೋಗ್ಯ ಪಾಲನೆಗಾಗಿ, ಸಮಗ್ರ ಆರೋಗ್ಯ ವ್ಯವಸ್ಥೆಗಾಗಿ ಆಗ್ರಹಿಸುವುದು.
    ಉ) ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಜನಸಮೂಹದ ಒಳಿತಿಗಾಗಿ ಜನರಬಳಿ ಕೊಂಡೊಯ್ಯುವುದು, ಜನಪರ ವಿಜ್ಞಾನ ಹಾಗೂ ತಂತ್ರಜ್ಞಾನ ಯೋಜನೆಗಳಿಗಾಗಿ ಒತ್ತಾಯಿಸುವುದು.
     ಊ) ಪ್ರಗತಿಗಾಗಿ ವಿಜ್ಞಾನ ಸಾಕಾರವಾಗಲು ಜಿಲ್ಲಾ/ತಾಲ್ಲೂಕು/ಪಂಚಾಯ್ತಿ/ಗ್ರಾಮ ಹಂತಗಳಲ್ಲಿ ಜ್ಞಾನ ವಿಜ್ಞಾನ ಕೇಂದ್ರಗಳನ್ನು ರಚಿಸುವುದು.
      ಋ) ಜನರಲ್ಲಿ ಮನೆಮಾಡಿರುವ ಮೂಢನಂಬಿಕೆಗಳ ವಿರುದ್ಧ ಜಾಗೃತಿ ಮೂಡಿಸುವುದು, ವೈಜ್ಞಾನಿಕ ಚಿಂತನಾ ಕ್ರಮವನ್ನು ಬೆಳೆಸುವುದು.