ಚಟುವಟಿಕೆಗಳು

ಗುರಿ ಮತ್ತು ಉದ್ದೇಶ ಸಾಧನೆಗಾಗಿ ಸಂಸ್ಥೆಯು ಸ್ಥಾಪನೆಗೊಂಡಾಗಿನಿಂದಲೂ ಇಲ್ಲಿಯವರೆಗೆ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ.
    1) ಅನಕ್ಷರತೆಯ ವಿರುದ್ಧ ಜನಜಾಗೃತಿಗಾಗಿ ರಾಜ್ಯಾದ್ಯಂತ ಕಲಾಜಾಥ ಏರ್ಪಡಿಸಿದೆ.
    2) ಪ್ರಾಥಮಿಕ ಶಿಕ್ಷಣದ ಸಾರ್ವತ್ರಿಕರಣಕ್ಕಾಗಿ ಶಿಕ್ಷಣದ ಬೋಧನಾ ಮಟ್ಟವನ್ನು ಹೆಚ್ಚಿಸಲು ಮತ್ತು ಕಲಿಕೆಯಲ್ಲಿ ಮಕ್ಕಳಿಗೆ ಆಸಕ್ತಿ ಹುಟ್ಟಿಸಲು ಬಾಲೋತ್ಸವ, ಚಿಣ್ಣರ ಮೇಳಗಳನ್ನು ಏರ್ಪಡಿಸಲಾಗಿದೆ.
    3) ಸಾಮಾನ್ಯ ಜನರ ಮೌಢ್ಯ ಅಳಿಯಲು 'ಪವಾಡ ರಹಸ್ಯ ಬಯಲು' ಕಾರ್ಯಕ್ರಮಗಳನ್ನು ನೀಡಲಾಗಿದೆ. ವೈಜ್ಞಾನಿಕ ಚಿಂತನೆಗೆ ಜನರನ್ನು ಪ್ರಚೋದಿಸಿದೆ. ಈ ಕಾರ್ಯಕ್ರಮ ಈಗಲೂ ನಡೆಯುತ್ತದೆ.
    4) ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ವಿನಿಮಯ ಕಾರ್ಯಕ್ರಮಗಳು (Teachers and students Exchange Programme) ಶಿಕ್ಷಕರಲ್ಲಿ ಬೋಧನಾ ಮಟ್ಟ ಉತ್ತಮಗೊಳ್ಳಲು ಹಾಗೂ ವಿದ್ಯಾರ್ಥಿಗಳಲ್ಲಿ ಕಲಿಕಾ ಆಸಕ್ತಿ ಕೆರಳಿಸುವಲ್ಲಿ ಸಹಾಯಕಾರಿಯಾಗುವುದರೊಂದಿಗೆ ಬೇರೆ ಬೇರೆ ನಾಡಿನ, ಬೇರೆ ಬೇರೆ ಭಾಷೆಗಳ ಶಿಕ್ಷಕರು ಮತ್ತು ಮಕ್ಕಳಲ್ಲಿ ಮಧುರ ಬಾಂಧವ್ಯದ ಬೆಸುಗೆ ಉಂಟಾಗಿದೆ. 5) ದುಡಿಯುವ ಮಹಿಳೆಯರಿಗೆ ಕಾನೂನು ತಿಳವಳಿಕೆ ಶಿಬಿರ, ಮಹಿಳಾ ಸಬಲೀಕರಣಕ್ಕಾಗಿ ಸ್ವಸಹಾಯ ಗುಂಪುಗಳ ರಚನೆ ಮಹಿಳಾ ಸಮಾನತೆಗಾಗಿ ತಿಳವಳಿಕೆಯ ಕಾರ್ಯಾಗಾರಗಳನ್ನು ಏರ್ಪಡಿಸಲಾಗಿದೆ.  
    6) 'ಜನರೆಡೆಗೆ ವಿಜ್ಞಾನ' ಕಲಾಜಾಥದ ಮೂಲಕ ವಿಜ್ಞಾನ ಜನಪ್ರಿಯಗೊಳಿಸುವ ಕಾರ್ಯಕ್ರಮ ಮಾಡಲಾಗಿದೆ.
    7) ಪೂರ್ಣ ಸೂರ್ಯಗ್ರಹಣ, ಶುಕ್ರಸಂಕ್ರಮಣ ಸಂದರ್ಭದಲ್ಲಿ ನಿಸರ್ಗದಲ್ಲಾಗುವ ಇಂಥ ವಿಸ್ಮಯ ಘಟನೆಗಳ ಕುರಿತು ಜನರಲ್ಲಿದ್ದ ಕುರುಡು ನಂಬಿಕೆಗಳನ್ನು ಹೋಗಲಾಡಿಸಲು ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆಗಳಂತಹ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ.  
8) ಜನಾರೋಗ್ಯ ಆಂದೋಲನ ಕನಾಟಕದ ಸದಸ್ಯ ಸಂಘಟನೆಯಾಗಿದ್ದುಕೊಂಡು ಜನಾರೋಗ್ಯ ಸಾಧಿಸುವ ನಿಟ್ಟಿನಲ್ಲಿ ಆರೋಗ್ಯ ಕಾರ್ಯಕ್ರಮಗಳನ್ನು ನಿರಂತರ ಸಂಘಟಿಸುತ್ತಾ ಬರಲಾಗಿದೆ.

ಪ್ರಮುಖ ಕಾರ್ಯಕ್ರಮಗಳು:
ಭಾರತ ಜ್ಞಾನ ವಿಜ್ಞಾನ ಸಮಿತಿ ಜಾರಿಗೊಳಿಸಿದ ಹತ್ತು ಹಲವಾರು ಕಾರ್ಯಕ್ರಮಗಳಲ್ಲಿ ಕೆಳಗಿನವು ಪ್ರಮುಖವಾದವುಗಳು
 

 

ಕಾರ್ಯಕ್ರಮ

ಉದ್ದೇಶ

ಫಲಾನುಭವಿಗಳು

1

ಭಾರತ ಜ್ಞಾನ ವಿಜ್ಞಾನ ಜಾಥ 1990

ಸಾಕ್ಷರತೆಗಾಗಿ ಜನಜಾಗೃತಿ

ಜನಸಮುದಾಯ

2

ಸಮತಾ ಕಲಾಜಾಥ 1993

ಮಹಿಳಾ ವಿಮೋಚನೆ

ಸಾಮಾನ್ಯ ಮಹಿಳೆಯರು

3

ಬಾಲೋತ್ಸವ 1994

ಮಕ್ಕಳಲ್ಲಿ ಕಲಿಕಾ ಆಸಕ್ತಿ ಮೂಡಿಸುವುದು

ಪ್ರಾಥಮಿಕ ಶಾಲಾ ಮಕ್ಕಳು

4

ಮಹಿಳಾ ಕಾನೂನು ಶಿಬಿರ

ದುಡಿಯುವ ಮಹಿಳೆಯರಿಗೆ ಕಾನೂನು ಪರಿಚಯ

ದುಡಿಯುವ ಮಹಿಳೆಯರು

5

ಚಿಣ್ಣರ ಮೇಳ 1996

ಮಕ್ಕಳಲ್ಲಿ ಕಲಿಕಾ ಆಸಕ್ತಿ ಮೂಡಿಸುವುದು

ವಿದ್ಯಾರ್ಥಿಗಳು

6

ಶಿಕ್ಷಕರ ತರಬೇತಿ ಶಿಬಿರ

ಬೋಧನ ಮಟ್ಟ ಉತ್ತಮ ಪಡಿಸಲು

ಶಿಕ್ಷಕರು

7

ಜೀವ ವೈವಿಧ್ಯ ದಾಖಲಾತಿ

ಮಕ್ಕಳು ಜೀವ ವೈವಿಧ್ಯತೆಯ ದಾಖಲೆ ಮಾಡುವುದು

ಶಿಕ್ಷಕರು ಮಕ್ಕಳು

8

ಸ್ವ ಸಹಾಯ ಗುಂಪುಗಳು ರಚನೆ

ಮಹಿಳೆಯರಲ್ಲಿ ಉಳಿತಾಯ ಮನೋಭಾವ ಮೂಡಿಸುವುದು,
ಸಬಲೀಕರಣಕ್ಕೆ ನೆರವಾಗುವುದು

ಮಹಿಳೆಯರು

9

ಜನರೆಡೆಗೆ ವಿಜ್ಞಾನ ಜಾಥಾ

ಜನರಲ್ಲಿ ವೈಜ್ಞಾನಿಕ ಅರಿವು ಮೂಡಿಸುವುದು

ಸಾಮಾನ್ಯನಾಗರಿಕರು

10

ವಿಜ್ಞಾನ ಉಪನ್ಯಾಸಗಳು

ಎಲ್ಲ ಜನ ವಿಭಾಗಗಳಲ್ಲಿ ವೈಜ್ಞಾನಿಕ ಚಿಂತನೆ ಉದ್ದೀಪನಗೊಳಿಸುವುದು

ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಜನ ಸಾಮಾನ್ಯರು

11

ಶೈಕ್ಷಣಿಕ ಸಮಾಲೋಚನಾ ಕಾರ್ಯಾಗಾರಗಳು

ಶಿಕ್ಷಣದ ಸಾರ್ವತ್ರೀಕರಣಕ್ಕಾಗಿ ಸಮುದಾಯದ ಸಹಭಾಗಿತ್ವ ಹೆಚ್ಚಿಸುವುದು

ಎಸ್.ಡಿ.ಎಂ.ಸಿ ಹಾಗೂ ಸಿ..ಸಿ ಸದಸ್ಯರು

12

ಗ್ರಾಮ ಸಂಚಯನ ಶಿಬಿರ

ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗಾಗಿ ಅವಶ್ಯಕ ಮಾಹಿತಿಯನ್ನು ನೀಡುವುದು

ಯುವಕರು, ಯುವತಿಯರು ಗ್ರಾ.ಪಂ.ಸದಸ್ಯರು, ಸ್ವ-ಸಹಾಯ ಸಂಘದ ಮಹಿಳೆಯರು