ಸಂಘಟನೆ

ಸದಸ್ಯತ್ವ: ಬಿಜಿವಿಎಸ್ ಧ್ಯೇಯೋದ್ದೇಶಗಳನ್ನು ಒಪ್ಪುವ ವಿದ್ಯಾರ್ಥಿಗಳು, ಶಿಕ್ಷಕರು, ಉದ್ಯೋಗಿಗಳು, ಕಲಾವಿದರು, ದಾನಿಗಳು, ವರ್ತಕರು, ಸ್ವ-ಸಹಾಯ ಸಂಘದ ಮಹಿಳೆಯರು, ವೈದ್ಯರು, ವಕೀಲರು ಎಲ್ಲರನ್ನೂ ಸದಸ್ಯರನ್ನಾಗಿ ನೋಂದಾಯಿಸಬಹುದು. 
     ಬಿಜಿವಿಎಸ್ ಎಲ್ಲಾ ಸದಸ್ಯರು ಒಂದು ಘಟಕದ ಸದಸ್ಯರಾಗಿರಬೇಕು. ಬಿಜಿವಿಎಸ್ ಪದಾಧಿಕಾರಿಗಳಾಗಿರುವವರು ಬೇರೆ ಸಂಘಟನೆಗಳಲ್ಲಿ ಜವಾಬ್ದಾರಿ (ಪದಾಧಿಕಾರಿಗಳಾಗಿ) ಹೊರುವುದು ಸೂಕ್ತವಲ್ಲ.
 
ಸದಸ್ಯತ್ವ ನೋಂದಣಿ: ಬಿಜಿವಿಎಸ್ ಧ್ಯೇಯೋದ್ದೇಶ ಹಾಗೂ ಸಂಘಟನೆಯ ಮಾಹಿತಿಯನ್ನೊಳಗೊಂಡ ಕರಪತ್ರದ ಜೊತೆ ಗುಂಪಾಗಿ ಅಥವಾ ವೈಯಕ್ತಿಕವಾಗಿ ಹೋಗಿ ಸಮಿತಿಯ ಉದ್ದೇಶಗಳನ್ನು ಪರಿಚಯಿಸಿ ಸದಸ್ಯತ್ವ ನೋಂದಾಯಿಸಲಾಗುವುದು.
ಅವಧಿ: ಪ್ರತಿ ವರ್ಷ ಮೇ 01 ರಿಂದ ಜೂನ್ 30ರವರೆಗೆ ಸದಸ್ಯತ್ವ ಆಂದೋಲನ ನಡೆಸುವುದು. ಜುಲೈ ಮೊದಲ ವಾರ ಸ್ಥಳೀಯ ಹಾಗೂ ತಾಲ್ಲೂಕು ಮಟ್ಟದಲ್ಲಿ ಕ್ರೋಢೀಕರಣ, ಜುಲೈ ಎರಡನೆ ವಾರ ಜಿಲ್ಲಾ ಮಟ್ಟದಲ್ಲಿ ಕ್ರೋಢೀಕರಿಸಿ ಮೂರನೆ ವಾರದಲ್ಲಿ ರಾಜ್ಯ ಕೇಂದ್ರಕ್ಕೆ ಕಳಿಸುವುದು. ಜುಲೈ ತಿಂಗಳ ಕೊನೆಯಲ್ಲಿ ನಡೆಯುವ ರಾಜ್ಯ ಸಮಿತಿ ಸಭೆ ಆ ವರ್ಷದ ಒಟ್ಟು ಸದಸ್ಯತ್ವವನ್ನು ಕ್ರೂಢೀಕರಿಸುವುದು. ಉಳಿದ ಸಮಯದಲ್ಲಿ ಸದಸ್ಯತ್ವ ಬಂದರೆ ಅದನ್ನು ನೇರವಾಗಿ ರಾಜ್ಯಕೇಂದ್ರಕ್ಕೆ ಕಳಿಸಿ ಅಲ್ಲಿಂದಲೇ ಸದಸ್ಯತ್ವ ಕೊಡಿಸಲು ವ್ಯವಸ್ಥೆ ಮಾಡುವುದು.
ವಿಧಾನ: ರಾಜ್ಯ ಸಮಿತಿ ಪ್ರತಿವರ್ಷ ಸದಸ್ಯತ್ವ ಪುಸ್ತಕಗಳನ್ನು ಮುದ್ರಿಸಿ ಜಿಲ್ಲಾ ಸಮಿತಿಗಳು ಸಲ್ಲಿಸುವ ಬೇಡಿಕೆಯಂತೆ ಕಳಿಸುವುದು.  ಜಿಲ್ಲಾ ಸಮಿತಿಯು ತಾಲ್ಲೂಕು, ಸ್ಥಳೀಯ ಸಮಿತಿಗಳಿಗೆ ಸದಸ್ಯತ್ವ ಪುಸ್ತಕ ತಲುಪಿಸಬೇಕು. ಜಿಲ್ಲಾ ಸಮಿತಿ ಇಲ್ಲದಿದ್ದ ಪಕ್ಷದಲ್ಲಿ ಸದಸ್ಯತ್ವ ಪುಸ್ತಕಗಳನ್ನು ನೇರವಾಗಿ ತಾಲ್ಲೂಕು ಸಮಿತಿಗೂ ತಾಲ್ಲೂಕು ಸಮಿತಿ ಇಲ್ಲದಿದ್ದ ಪಕ್ಷದಲ್ಲಿ ನೇರವಾಗಿ ಸ್ಥಳೀಯ ಘಟಕಕ್ಕೂ ಕಳಿಸಲಾಗುವುದು. ಹೊಸದಾಗಿ ಸದಸ್ಯತ್ವ ನಡೆಸಲು ಕೆಲ ವ್ಯಕ್ತಿಗಳಿಗೂ ಪುಸ್ತಕ ನೀಡಬಹುದು. ಇದೇ ರೀತಿಯಲ್ಲಿ ಸದಸ್ಯತ್ವ ನೋಂದಣಿ ಆದ ನಂತರ ಕೌಂಟರ್ ಫಾಯಿಲ್ ಮತ್ತು ಹಣವನ್ನು ಸ್ಥಳೀಯ ಸಮಿತಿ, ತಾಲ್ಲೂಕು, ಜಿಲ್ಲಾ ಸಮಿತಿಯ ಮೂಲಕ ರಾಜ್ಯ ಸಮಿತಿಗೆ ತಲುಪಿಸಬೇಕು. ಸದಸ್ಯತ್ವ ಶುಲ್ಕ 10 ರೂ.

ಸಂಗ್ರಹವಾದ ಹಣವನ್ನು ಈ ಕೆಳಕಂಡಂತೆ ನಿರ್ವಹಣೆ ಮಾಡುವುದು.
ಸ್ಥಳೀಯ ಸಮಿತಿ  - 4 ರೂ    ತಾಲ್ಲೂಕು ಸಮಿತಿ - 2 ರೂ
ಜಿಲ್ಲಾ ಸಮಿತಿ    - 2 ರೂ    ರಾಜ್ಯ ಸಮಿತಿಗೆ   - 2 ರೂ
ತಾಲ್ಲೂಕು ಅಥವಾ ಜಿಲ್ಲಾ ಸಮಿತಿಗಳು ಇಲ್ಲದಿದ್ದಲ್ಲಿ ಆ ಹಣವನ್ನು ರಾಜ್ಯ ಸಮಿತಿಗೆ ಕಳುಹಿಸುವುದು.
    ಸದಸ್ಯತ್ವ ಕಳಿಸುವುದು ಎನ್ನುವಾಗ ಸದಸ್ಯತ್ವದ ಹಣ, ಸದಸ್ಯರ ಪಟ್ಟಿ ಹಾಗೂ ಸದಸ್ಯತ್ವ ಪುಸ್ತಕದ  ಕೌಂಟರ್ಫಾಯಿಲ್ ಅನ್ನು ಕಳಿಸಬೇಕು. ಒಂದು ವೇಳೆ ಸದಸ್ಯತ್ವ ಮಾಡಿಸಲು ಆಗದಿದ್ದರೂ ಸದಸ್ಯತ್ವದ ಅವಧಿ ಮುಗಿದ ಕೂಡಲೇ ಆ ಸದಸ್ಯತ್ವ ಪುಸ್ತಕವನ್ನು ಮೇಲಿನ ಸಮಿತಿಗೆ ಕಳಿಸುವುದು.
    ಸದಸ್ಯತ್ವದ ಹಣದಲ್ಲಿ 4ರೂ ಸ್ಥಳೀಯ ಸಮಿತಿಗೆ, 2ರೂ ತಾಲೂಕು ಸಮಿತಿಗೆ, 2ರೂ ಜಿಲ್ಲಾ ಸಮಿತಿಗೆ ಹಾಗೂ 2 ರೂಗಳನ್ನು ರಾಜ್ಯ ಸಮಿತಿಗೆ ಸಂದಾಯ ಮಾಡುವುದು.
     ಒಂದು ವೇಳೆ ಸ್ಥಳೀಯ ಸಮಿತಿಯಿದ್ದು ತಾಲೂಕು ಸಮಿತಿ ಇಲ್ಲದಿದ್ದಲ್ಲಿ ಸ್ಥಳೀಯ ಸಮಿತಿಯವರು ತಮ್ಮ ಪಾಲಿನ 4 ರೂ ಉಳಿಸಿಕೊಂಡು 6ರೂಗಳನ್ನು ಜಿಲ್ಲಾ ಸಮಿತಿಗೆ ಕಳಿಸುವುದು. ಜಿಲ್ಲಾ ಸಮಿತಿ ತನ್ನ 2ರೂ ಉಳಿಸಿಕೊಂಡು ಉಳಿದ 4ರೂಗಳನ್ನು ಎಲ್ಲ ದಾಖಲೆಗಳೊಂದಿಗೆ ರಾಜ್ಯಸಮಿತಿಗೆ ಕಳಿಸುವುದು. ಜಿಲ್ಲಾ ಸಮಿತಿಯೂ ಇಲ್ಲದ ಕಡೆಗಳಲ್ಲಿ ಸ್ಥ.ಸಮಿತಿಯವರು 4ರೂ ಉಳಿಸಿಕೊಂಡು 6ರೂ ಅನ್ನು ರಾಜ್ಯಸಮಿತಿಗೆ ಕಳಿಸುವುದು. ತಾಲೂಕು ಸಮಿತಿಯೆ ಸ್ಥಳೀಯ ಸಮಿತಿಯಾಗಿದ್ದ ಕಡೆಗಳಲ್ಲಿ ಅವರು 4ರೂ ಉಳಿಸಿಕೊಂಡು 6ರೂಗಳನ್ನು ಜಿಲ್ಲಾ ಸಮಿತಿಗೆ ಕಳಿಸುವುದು. ಜಿಲ್ಲಾ ಸಮಿತಿಯವರು 2ರೂ ಉಳಿಸಿಕೊಂಡು 4ರೂ ಅನ್ನು ರಾಜ್ಯಸಮಿತಿಗೆ ಕಳಿಸುವುದು.
    ಸದಸ್ಯತ್ವ ಆದ ಕೂಡಲೇ ಎಲ್ಲ ಸದಸ್ಯರ ಸಭೆ ಕರೆದು ಸ್ಥಳೀಯ ಸಮಿತಿ ರಚಿಸುವುದು.
    ಸ್ಥಳೀಯವಾಗಿ ನಡೆಯುವ ಎಲ್ಲ ಕಾರ್ಯಕ್ರಮಗಳಿಗೂ ಸಮಿತಿಯ ಎಲ್ಲ ಸದಸ್ಯರನ್ನೂ ಆಹ್ವಾನಿಸುವುದು.
    ಸದಸ್ಯರ ಆಸಕ್ತಿಗೆ ಅನುಗುಣವಾಗಿ ಅವರಿಗೆ ಜವಾಬ್ದಾರಿಗಳನ್ನು ನೀಡಿ ಸಂಘಟನೆಯಲ್ಲಿ ತೊಡಗಿಸುವುದು..

ಘಟಕಗಳಿಗೆ ಅರ್ಹತೆಗಳು
ಸ್ಥಳೀಯ ಘಟಕ: ಸ್ಥಳೀಯ ಘಟಕ ರಚಿಸಲು ಕನಿಷ್ಠ 25 ಸದಸ್ಯರಿರಬೇಕು.
ತಾಲ್ಲೂಕು ಸಮಿತಿ: ತಾಲ್ಲೂಕು ಸಮಿತಿ ರಚನೆ ಮಾಡಲು ಕನಿಷ್ಠ 3 ಸ್ಥಳೀಯ ಘಟಕಗಳು ಅಥವಾ 100 ಸದಸ್ಯತ್ವ ಹೊಂದಿರಬೇಕು.
ಜಿಲ್ಲಾ ಸಮಿತಿ: ಜಿಲ್ಲಾ ಸಮಿತಿ ರಚಿಸಲು ಕನಿಷ್ಠ 3 ತಾಲ್ಲೂಕುಗಳಲ್ಲಿ ತಾಲ್ಲೂಕು ಸಮಿತಿಗಳಿರಬೇಕು. ಒಂದು ವೇಳೆ ಇದಕ್ಕಿಂತ ಕಡಿಮೆ ಇದ್ದರೆ ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ 'ಸಂಘಟನಾ ಸಮಿತಿ'ಗಳನ್ನು ರಚಿಸಿ ಅದರ ಮೂಲಕ ಕಾರ್ಯ ನಿರ್ವಹಿಸಬೇಕು.

ಸಭೆಗಳು
ಸ್ಥಳೀಯ ಸಮಿತಿ - ಕನಿಷ್ಠ ತಿಂಗಳಿಗೊಮ್ಮೆ        ತಾಲ್ಲೂಕು ಸಮಿತಿ - ಕನಿಷ್ಠ ತಿಂಗಳಿಗೊಮ್ಮೆ
ಜಿಲ್ಲಾ ಸಮಿತಿ - ಕನಿಷ್ಠ 2 ತಿಂಗಳಿಗೊಮ್ಮೆ        ರಾಜ್ಯ ಸಮಿತಿ -  ಕನಿಷ್ಠ 3 ತಿಂಗಳಿಗೊಮ್ಮೆ
    ಪ್ರತಿ ಘಟಕದ ಸದಸ್ಯತ್ವ ಮುಗಿದ ತಕ್ಷಣ ಕಾರ್ಯಕಾರಿ ಮಂಡಳಿಯನ್ನು ರಚಿಸುವುದು (ಸರ್ವ ಸದಸ್ಯರ ಸಭೆ ಕರೆದು). ಇದರ ಜವಾಬ್ದಾರಿಯನ್ನು ಅದರ ಮೇಲಿನ ಸಮಿತಿಯು ಸೂಚಿಸುವ ಅದರ ಸದಸ್ಯರು ನಿರ್ವಹಿಸಬೇಕು. ಸದಸ್ಯರ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರ ಪಟ್ಟಿಯನ್ನು ಪ್ರತಿ ಘಟಕಗಳೂ ಹಂತ ಹಂತವಾಗಿ ತಾಲ್ಲೂಕು, ಜಿಲ್ಲೆ ಮತ್ತು ರಾಜ್ಯ ಸಮಿತಿಗಳಿಗೆ ಕಳಿಸಬೇಕು. ಈ ಬಗ್ಗೆ ರಾಜ್ಯ ಸಮಿತಿಯು ಕ್ರೊಢೀಕರಿಸಿ ಸಭೆಯಲ್ಲಿ ಇಟ್ಟು ಘಟಕಗಳಿಗೆ ಮನ್ನಣೆ ನೀಡಬೇಕು.
ಕಾರ್ಯಕಾರಿ ಸಮಿತಿಯ ರೂಪರೇಷೆ
ಸ್ಥಳೀಯ ಸಮಿತಿ:
    ಅಧ್ಯಕ್ಷರು          - 1        ಉಪಾಧ್ಯಕ್ಷರು         - 1
    ಕಾರ್ಯದರ್ಶಿ         - 1        ಸಹ ಕಾರ್ಯದರ್ಶಿ    - 1
    ಖಜಾಂಚಿ         - 1        ಸದಸ್ಯರು         - 6
                            ಒಟ್ಟು:   11
ತಾಲ್ಲೂಕು ಸಮಿತಿ
    ಅಧ್ಯಕ್ಷರು          - 1
    ಉಪಾಧ್ಯಕ್ಷರು         - 1
   ಕಾರ್ಯದರ್ಶಿ         - 1
    ಸಹ ಕಾರ್ಯದರ್ಶಿ     - 1
    ಖಜಾಂಚಿ         - 1
    ಸದಸ್ಯರು         - 8
                ------
            ಒಟ್ಟು:   13
ಜಿಲ್ಲಾ ಸಮಿತಿ
    ಅಧ್ಯಕ್ಷರು          - 1
    ಉಪಾಧ್ಯಕ್ಷರು         - 2  ಒಬ್ಬರು ಮಹಿಳೆ
    ಕಾರ್ಯದರ್ಶಿ         - 1
    ಸಹ ಕಾರ್ಯದರ್ಶಿ     - 2  ಒಬ್ಬರು ಮಹಿಳೆ
    ಖಜಾಂಚಿ         - 1
    ಸದಸ್ಯರು         - 8
                ------
            ಒಟ್ಟು:   15
    ಎಲ್ಲಾ ಸಮಿತಿಗಳಲ್ಲಿ ಕನಿಷ್ಠ 33% ರಷ್ಟು ಮಹಿಳೆಯರು ಇರುವಂತೆ ನೋಡಿಕೊಳ್ಳುವುದು.

ಸಮ್ಮೇಳನಗಳು: ಪ್ರತಿ ವರ್ಷವೂ ಪ್ರತಿ ಘಟಕಗಳೂ ಸಮ್ಮೇಳನಗಳನ್ನು ನಡೆಸಬೇಕು. ಸಮ್ಮೇಳನಗಳಲ್ಲಿ ಘಟಕವು ನಡೆಸಿದ ಕಾರ್ಯಕ್ರಮಗಳು, ಕಂಡುಕೊಂಡ ಸಮಸ್ಯೆಗಳು, ಸಮಾಜವನ್ನು ಗಮನಿಸಿದ ರೀತಿ, ಸಂಘಟನಾ ವಿಸ್ತರಣೆ, ಮಧ್ಯಪ್ರವೇಶ, ಹಣಕಾಸು ಇತ್ಯಾದಿಗಳ ಬಗ್ಗೆ ಕಾರ್ಯದರ್ಶಿಗಳು ವರದಿ ತಯಾರಿಸಿ ಅದನ್ನು ಆಯಾ ಸಮಿತಿಗಳಲ್ಲಿಟ್ಟು ಚರ್ಚಿಸಿ ಅಂಗೀಕರಿಸಿದ ನಂತರ ಸಮಾವೇಶದ ಮುಂದೆ ಚರ್ಚೆಗೆ ಇಡಬೇಕು. ಈ ಸಮ್ಮೇಳನ ಆಯಾ ಪ್ರದೇಶದ ಜನರ ಗಮನಕ್ಕೆ ಬರುವಂತೆ ನಡೆಯಬೇಕು. ಸ್ಥಳೀಯ, ತಾಲ್ಲೂಕು, ಸಮ್ಮೇಳನಗಳು , ಜಿಲ್ಲಾ ಸಮ್ಮೇಳನ ಜನವರಿಯಲ್ಲಿ, ರಾಜ್ಯ ಸಮ್ಮೇಳನವನ್ನು ಫೆಬ್ರವರಿಯಲ್ಲಿ ನಡೆಸುವುದು.

ಕಾರ್ಯಕರ್ತರಿಗಾಗಿ ಶಿಬಿರಗಳು: ಸಂಘಟನೆಯ ಗುರಿ ಉದ್ದೇಶಗಳನ್ನು ವಿವರಿಸಲು, ಕಾರ್ಯಕ್ರಮಗಳನ್ನು ರೂಪಿಸಲು ಹಾಗೂ ಸ್ಥಳೀಯ ಸಮಸ್ಯೆಗಳಿಗೆ ಮಧ್ಯಪ್ರವೇಶ ಮಾಡಲು ಪೂರಕವಾಗಿ ತಾಲ್ಲೂಕು, ಜಿಲ್ಲೆ, ರಾಜ್ಯಮಟ್ಟದಲ್ಲಿ ಕಾರ್ಯಕರ್ತರಿಗಾಗಿ ಶಿಬಿರಗಳನ್ನು ಸಂಘಟಿಸುವುದು. ಪ್ರತಿ ವರ್ಷ ಮೇ ತಿಂಗಳು ರಾಜ್ಯಮಟ್ಟದಲ್ಲಿ ಕಾರ್ಯಾಗಾರವನ್ನು ಸಂಘಟಿಸಬೇಕು.

ಜ್ಞಾನ ವಿಜ್ಞಾನ ಮಿತ್ರ:    ಪ್ರತಿ ಘಟಕವೂ ಬಿಜಿವಿಎಸ್ನ ಮುಖವಾಣಿಯಾದ ಜ್ಞಾನ ವಿಜ್ಞಾನ ಮಿತ್ರಕ್ಕೆ ಕನಿಷ್ಠ 20 ಚಂದಾ ನೋಂದಾಯಿಸಬೇಕು. ಚಂದಾ ಹಣದಲ್ಲಿ ಅಂಚೆ ಹಾಗೂ ಡಿ.ಡಿ ವೆಚ್ಚವನ್ನು ಉಳಿಸಿಕೊಂಡು ಉಳಿಕೆ ಹಣವನ್ನು ರಾಜ್ಯ ಕೇಂದ್ರಕ್ಕೆ ಕಳುಹಿಸುವುದು. ಘಟಕಗಳು ನಡೆಸುವ ಚಟುವಟಿಕೆಗಳ ವರದಿಗಳನ್ನು ಪತ್ರಿಕೆಗೆ ಕಳಿಸುವುದು. ಚಂದಾ ವಿವರ: ವಾರ್ಷಿಕ: 35/-,  3 ವರ್ಷ: 100/-, 5 ವರ್ಷ: 150/-

ಲೆಕ್ಕಪತ್ರ: ಪ್ರತಿ ಘಟಕಗಳೂ ಸರಿಯಾದ ಲೆಕ್ಕಪತ್ರ ಇಡಬೇಕು. ಖಜಾಂಚಿಯನ್ನು ಒಳಗೊಂಡಂತೆ ಇಬ್ಬರ ಹೆಸರಿನಲ್ಲಿ ಬ್ಯಾಂಕಿನಲ್ಲಿ ಜಂಟಿ ಖಾತೆ ತೆರೆದು ಆ ಮೂಲಕ ವ್ಯವಹರಿಸಬೇಕು. ಸ್ಥಳೀಯ ಸಮಿತಿಗಳು ಸಂಪನ್ಮೂಲ ಸಂಗ್ರಹಿಸಿ ಕಾರ್ಯಕ್ರಮ ಸಭೆ ನಡೆಸಿದರೂ ಅದರ ಲೆಕ್ಕವನ್ನು ಇಡಬೇಕು. ಪ್ರತಿ ಕಾರ್ಯಕ್ರಮ ನಡೆದ ಕೂಡಲೆ ಆ ಕಾರ್ಯಕ್ರಮದ ಆದಾಯ ವೆಚ್ಚಗಳನ್ನು ಸಭೆಯ ಮುಂದಿಟ್ಟು ಅಂಗೀಕಾರ ಪಡೆಯಬೇಕು.
ಭಾರತ ಜ್ಞಾನ ವಿಜ್ಞಾನ ಸಮಿತಿಯನ್ನು ಜನವಿಜ್ಞಾನ ಸಂಘಟನೆಯನ್ನಾಗಿ ಮುನ್ನಡೆಸಲು ಆಸಕ್ತರಾದ ಎಲ್ಲರಿಗೂ ಸೂಕ್ತ ಮನ್ನಣೆಯನ್ನು ನೀಡಿ ಅವರ ಆಸಕ್ತಿಗನುಗುಣವಾದ ಜವಾಬ್ಧಾರಿ ಹಾಗೂ ಮಾರ್ಗದರ್ಶನ ಮಾಡಿ ಸಂಘಟನೆಯನ್ನು ವಿಜ್ಞಾನ ಚಳುವಳಿಯನ್ನಾಗಿ ಮುನ್ನಡೆಸಲು, ಜನನಾಯಕತ್ವ ರೂಪಿಸಲು ಘಟಕ ಮಟ್ಟದಿಂದ ಪ್ರಾರಂಭಿಸಿ ಕೇಂದ್ರ ಸಮಿತಿಗಳ ತನಕ ಗಮನ ವಹಿಸಿ ಕೆಲಸ ಮಾಡುವುದು ಸಂಘಟನೆಯ ಪರಮ ಉದ್ದೇಶ.